News

5 ಲಕ್ಷ ನಗದು ದೋಚಿ ಪರಾರಿಯಾದ ಖದೀಮರ ತಂಡ |ಓರಿಯಂಟ್ ಬ್ಯಾಂಕ್ ಆಪ್ ಕಾಮರ್ಸ್

ಬ್ಯಾಂಕ್ ಕ್ಯಾಷಿಯರ್ ಚಿತ್ತ ಬೇರೆಡೆ ಸೆಳೆದು ಐದು ಲಕ್ಷ ನಗದು ದೋಚಿ ಖದೀಮರ ತಂಡ ಪರಾರಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

 

ಹೊಸಪೇಟೆ: ಬ್ಯಾಂಕ್ ಕ್ಯಾಷಿಯರ್ ಚಿತ್ತ ಬೇರೆಡೆ ಸೆಳೆದು ಐದು ಲಕ್ಷ ನಗದು ದೋಚಿ ಖದೀಮರ ತಂಡ ಪರಾರಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.

ಹೊಸಪೇಟೆ ಪಟ್ಟಣದ ರೋಟರಿ ವೃತ್ತದಲ್ಲಿರುವ ಓರಿಯಂಟ್ ಬ್ಯಾಂಕ್ ಆಪ್ ಕಾಮರ್ಸ್ ಬ್ಯಾಂಕ್ ನಲ್ಲಿ 
ಶುಕ್ರವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಬ್ಯಾಂಕ್ ಮ್ಯಾನೇಜರ್ ಧನಂಜಯ್ ಅವರ ಗಮನ ಬೇರೆಡೆ ಸೆಳೆದು ಐದು ಲಕ್ಷ ದೋಚಲಾಗಿದೆ. 

ನಾಲ್ಕಾರು ಜನರ ತಂಡದಿಂದ ಈ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.ಬ್ಯಾಂಕ್ ಮೇನೆಜರ್ ಧನಂಜಯ್ ಅವರಿಂದ ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.