News Tourism

ವಿಶ್ವಪ್ರಸಿದ್ಧ ಹಂಪಿ ಉತ್ಸವಕ್ಕೆ ಇಂದು ಸಿಎಂ ಬಿಎಸ್​ವೈ ಚಾಲನೆ; ರಾಕಿಂಗ್​ ಸ್ಟಾರ್ ಯಶ್​ ತಾರಾ ಮೆರುಗು

ಇಂದಿನ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಹೀರೋ ಯಶ್ ತಾರಾ ಮೆರಗು‌ ನೀಡಲಿದ್ದಾರೆ. ಉತ್ಸವದ ಮೊದಲ ದಿನ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ರಾತ್ರಿ ಬೆಂಗಳೂರಿನ ಮನೋಮೂರ್ತಿ ಮತ್ತು ತಂಡದಿಂದ ರಸಮಂಜರಿ ಹಾಗೂ ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ಹಾಸ್ಯಸಂಜೆ ನಡೆಯಲಿದೆ.

 ನೆರೆಯ ನೆಪವೊಡ್ಡಿ ಮುಂದೂಡಲಾಗಿದ್ದ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವಕ್ಕೆ ಇಂದು ಕಾಲಕೂಡಿ ಬಂದಿದೆ. ಜನಪ್ರಿಯ, ವಿಶ್ವಪ್ರಸಿದ್ದ ಹಂಪಿ ಉತ್ಸವಕ್ಕೆ ಇಂದು ಅದ್ದೂರಿ ಚಾಲನೆ ಸಿಗಲಿದೆ.

ಇಂದು ಮತ್ತು ನಾಳೆ ಜರುಗುವ ಎರಡು ದಿನಗಳ ಹಂಪಿ ಉತ್ಸವಕ್ಕೆ ಬಳ್ಳಾರಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೆ ಇಂದಿನ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್​. ಯಡಿಯೂರಪ್ಪ ಆಗಮಿಸಲಿದ್ದು, ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿಯಾಗಿರುವ ಡಿಸಿಎಂ ಲಕ್ಷ್ಮಣ ಸವದಿ ಹಂಪಿ ಉತ್ಸವದಲ್ಲಿ   ಭಾಗಿಯಾಗಲಿದ್ದಾರೆ.
ವಿಶ್ವಪ್ರಸಿದ್ಧ ಹಂಪಿ ಉತ್ಸವಕ್ಕೆ ಇಂದು ಸಿಎಂ ಬಿಎಸ್​ವೈ ಚಾಲನೆ; ರಾಕಿಂಗ್​ ಸ್ಟಾರ್ ಯಶ್​ ತಾರಾ ಮೆರುಗು
ವಿಶ್ವಪ್ರಸಿದ್ಧ ಹಂಪಿಯಲ್ಲಿ ಒಟ್ಟು ನಾಲ್ಕು ವೇದಿಕೆಗಳಲ್ಲಿ ಉತ್ಸವ ಜರುಗಲಿದೆ. ಪ್ರಮುಖ ವೇದಿಕೆ ಶ್ರೀಕೃಷ್ಣದೇವರಾಯ (ಗಾಯತ್ರಿ ಪೀಠ) ವೇದಿಕೆ, ಎದುರು ಬಸವಣ್ಣ ವೇದಿಕೆ, ಶ್ರೀವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಕಡಲೆಕಾಳು ಗಣಪ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇಂದಿನ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಹೀರೋ ಯಶ್ ತಾರಾ ಮೆರಗು‌ ನೀಡಲಿದ್ದಾರೆ. ಉತ್ಸವದ ಮೊದಲ ದಿನ ಶ್ರೀಕೃಷ್ಣದೇವರಾಯ ವೇದಿಕೆಯಲ್ಲಿ ರಾತ್ರಿ ಬೆಂಗಳೂರಿನ ಮನೋಮೂರ್ತಿ ಮತ್ತು ತಂಡದಿಂದ ರಸಮಂಜರಿ ಹಾಗೂ ಗಂಗಾವತಿ ಪ್ರಾಣೇಶ ಮತ್ತು ತಂಡದಿಂದ ಹಾಸ್ಯಸಂಜೆ ನಡೆಯಲಿದೆ.

ಜೊತೆಗೆ ಬಾಲಿವುಡ್ ಗಾಯಕರಾದ ಮುಂಬೈನ ನೀತಿ ಮೋಹನ್ ಮತ್ತು ಅವರ ತಂಡ ಫುಲ್ ಗಾಯನದ ರಸದೌತಣ‌ ಹರಿಸಲಿದ್ದಾರೆ. ಇದರ‌ ಜೊತೆಗೆ ಹಂಪಿ ಬೈ ಸ್ಕೈ, ಸಾಹಸ ಕ್ರೀಡೆಗಳು ಜರುಗಲಿವೆ. ಪಾರಂಪರಿಕ ಸ್ಪರ್ಧೆ ಮತ್ತು ಮಾತಂಗ ಪರ್ವತ ಮೈದಾನದ ಆವರಣದಲ್ಲಿ ಮತ್ಸ್ಯಮೇಳ ಆಯೋಜಿಸಲಾಗಿದೆ.