News

ಆನಂದ್ ಸಿಂಗ್ ನೇತೃತ್ವದಲ್ಲಿ ನಡೆದ ಸಿಎಎ ಜಾಗೃತಿ ಅಭಿಯಾನ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಕುರಿತ ಜಾಗೃತಿ ಅಭಿಯಾನದಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಅಲ್ಲಲ್ಲಿ ಮುಖಭಂಗ ಅನುಭವಿಸುವಂತಾಯಿತು.

ಎಸ್ ಆರ್ ನಗರ ಹಾಗೂ ಛಲವಾದಿಕೇರಿಯಲ್ಲಿ ಆನಂದ್ ಸಿಂಗ್ ನೇತೃತ್ವದಲ್ಲಿ ನಡೆದ ಜಾಗೃತಿ ಅಭಿಯಾನಕ್ಕೆ ಜನರಿಂದ ತೀವ್ರ  ವಿರೋಧ ವ್ಯಕ್ತವಾಯಿತು.

AnandSingh1

ಬಾರಿ ಪೊಲೀಸ್ ಭದ್ರತೆಯಲ್ಲಿ ಎಸ್.ಆರ್.ನಗರದಲ್ಲಿ ಜಾಗೃತಿ ಅಭಿಯಾನ ಪ್ರಾರಂಭಿಸಿದ  ಆನಂದ್ ಸಿಂಗ್ ಗೆ ಕಾಯ್ದೆ ಬಗ್ಗೆ ನಮಗೆಲ್ಲ ಗೊತ್ತಿದೆ ಮುಂದೆ ಹೋಗು ಎಂದು ಅಲ್ಲಿನ ನಿವಾಸಿಗಳು ನೇರವಾಗಿಯೇ ಹೇಳಿದರು. ಎಸ್.ಆರ್ ನಗರದ ಬಹುತೇಕ ಮನೆಗಳ ಬಾಗಿಲು ಬಂದ್ ಮಾಡಿ ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದರು.

ಎಸ್ ಆರ್ ನಗರದ ಜನಸಾಮಾನ್ಯರೆಲ್ಲರೂ ಒಟ್ಟಿಗೆ ಸೇರಿ ಜಾಗೃತಿ ಅಭಿಯಾನವನ್ನು ಧಿಕ್ಕರಿಸಿದರು.ಆನಂದ್ ಸಿಂಗ್ ಕೈಯಲ್ಲಿದ್ದ ಒಂದೇ ಒಂದು ಕರ ಪತ್ರ ಪಡೆಯದೆ ಸಾಮೂಹಿಕವಾಗಿ ಕಾಯ್ದೆ ಜಾರಿಗೆ ಆಕ್ರೋಶ ವ್ಯಕ್ತಪಡಿಸಿದರು.ಬೆರಳೆಣಿಕೆಯಷ್ಟು ಜನಗಳು ಮಾತ್ರ ಜಾಗೃತಿ ಅಭಿಯಾನದ ಕರ ಪತ್ರ ಪಡೆದು ಆನಂದ್ ಸಿಂಗ್ ಅವರನ್ನು ವಾಪಾಸ್ ಕಳುಹಿಸಿದರು.